ರಾಜ್ಯ ಗಣಿ ಇಲಾಖೆಯಿಂದ 2062 ಕೋಟಿ ಹಗರಣ ನಡೆದಿದೆ, ಇದಕ್ಕೆ ಮುಖ್ಯಮಂತ್ರಿಗಳ ಕಚೇರಿಯನ್ನು ಬಳಸಿಕೊಳ್ಳಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನಗರದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಟೆಂಡರ್, ಅಗ್ರಿಮೆಂಟ್ ಇಲ್ಲದೆಯೇ 3 ಕಂಪೆನಿಗಳಿಗೆ ಸಂಡೂರು ಬಳಿಯ ಸುಬ್ಬರಾಯನಹಳ್ಳಿ ಬಳಿ ಗಣಿಗಾರಿಕೆ ಮಾಡಲು ಅವಕಾಶ ನೀಡಲಾಗಿದೆ, ಈ ಕಂಪೆನಿಗಳು ನಿಯಮಕ್ಕೆ ವಿರುದ್ಧವಾಗಿ 30 ಲಕ್ಷ ಟನ್ ಅದಿರು ಉತ್ಖನನ ಮಾಡಿವೆ ಎಂದು ಅವರು ಗಂಭೀರ ಆರೋಫ ಮಾಡಿದರು. ಈ ಎಲ್ಲಾ ಅಕ್ರಮಗಳು ಅಧಿಕಾರಿ ತುಷಾರ್ ಅವರ ಸಮಯದಲ್ಲೇ ಆಗಿದ್ದು, ಎಲ್ಲಾ ಅಕ್ರಮಗಳಿಗೂ ಸಿಎಂ ಕಚೇರಿಯ ಬೆಂಬಲ ಇದೆ, ಸಿಎಂ ಕಚೇರಿಯಲ್ಲಿಯೇ ಸುಳ್ಳು ದಾಖಲೆಗಳನ್ನು ತಯಾರಿಸಲಾಗಿದೆ, ಹೀಗಾಗಿ ತುಷಾರ್ ಅವರನ್ನು ಸಿಎಂ ಕಚೇರಿಯಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. <br /> <br /> <br />HD Kumarswamy had called a press meet today and talks about the scandals done by the congress government in the state